Wednesday 18 February 2015

ಅಮ್ಮನಂತ ಅಮ್ಮನಾಗೋ ತಯಾರಿ

ರಮ್ಯ, ನಿನ್ನಪ್ಪ ಇದರ ಬಗ್ಗೆ ಮಾತೇ ಆಡಲ್ಲ. ನೀನು ಕೇಳೋದು ವೇಸ್ಟ್.

ಇಲ್ಲ, ನಾನು ಕೇಳಲೇ ಬೇಕು. ನನ್ನಪ್ಪ ತುಂಬಾ ಸಾಫ್ಟ್ ಎಲ್ಲಾ ಹೇಳ್ತಾರೆ ನಂಗೆ.

ಪೆದ್ದಿ ನೀನು, ಯಾವ ಅಪ್ಪನೂ ಇದರ ಬಗ್ಗೆ ಮಾತಾಡಲ್ಲYou just go through this site. ನಿಂಗೆ ಇದರ ಬಗ್ಗೆ ಎಲ್ಲಾ ಮಾಹಿತಿ ಸಿಗುತ್ತೆ.. ಸಿ ಯು.. ಬೈ.

ಶಟಲ್ ಬ್ಯಾಡ್ಮಿಂಟನ್ ಆಡಿದ ರಮ್ಯ ಹಾಗೂ ಮೋನ ಯಾವುದೋ ವಿಷಯದ ಬಗ್ಗೆ ಗಂಭೀರ ಚರ್ಚೆಯಲ್ಲಿದ್ದಾರೆ. ರಮ್ಯ ಮುಖ ಹಿಡಿಯಷ್ಟಾಗಿದೆಪಾಪ ಅವಳದೇ ವಯಸ್ಸಿನ ಮೋನ ಏನೂಂತ ಸಮಾಧಾನ ಮಾಡಿಯಾಳು. ಮಾಡೋಕೆ ಅವಳಿಗೇನು ಗೊತ್ತು ಅದರ ಬಗ್ಗೆ. ಇಬ್ಬರ ಮನೆಯಿಂದಲೂ ಕಾರ್ ಬಂತು, ಡ್ರೈವರ್ ಬಂದು ರಮ್ಯ ಮೇಡಂ ಬ್ಯಾಗ್ ಕೊಡಿ ಎಂದಾಗ ಪೆಚ್ಚು ಮುಖ ಹೊತ್ತು ಕಾರಿನ ಕಡೆ ನಡೆದಳು. ಅಮ್ಮ ಇರ್ಬೇಕಿತ್ತು ಹೊತ್ತಲ್ಲಿ, ಅಪ್ಪಂಗೆ ಹೇಗ್ ಕೇಳ್ಳಿ ಅನ್ನೋ ಚಿಂತೇಲೇ ಮನೆ ತಲುಪಿದಳು.

ಯಾವತ್ತಿನ ಉತ್ಸಾಹ ಇಂದಿಲ್ಲ. ನಿನ್ನೆಯವರೆಗೂ ಕಾರು ಅಂಗಳ ತಲುಪುತ್ತಿದ್ದಂತೆ ಪಪ್ಪಾ ಎನ್ನುತ್ತಾ ಓಡಿ ಬಂದು, ಕೊರಳಿಗೆ ಜೋತು ಬೀಳುತ್ತಿದ್ದ ೧೨ರ ರಮ್ಯ ಇಂದು ತನ್ನ ಮೊಣಕಾಲವರೆಗಿನ ಬಿಳಿ ಸ್ಕರ್ಟ್ನ್ನು ಮುದ್ದೆಯಂತೆ ಮಡಿಚಿ, ಬಿಳುಚಿ ನಿಂತಿದ್ದಾಳೆ. ಗಾಬರಿ ಆಯಿತು ಸೂರಿಗೆ ಮಗಳ ವರ್ತನೆ ಕಂಡು. 
ಏನಾಯ್ತು ನನ್ ಬಂಗಾರಿಗಿಂದು ಎನ್ನುತ್ತಾ ಹತ್ತಿರ ಬಂದರೆ, ಇವ ಯಾರೋ ಹೊಸ ಮನುಷ್ಯ ಎಂಬಂತೆ ಮತ್ತಷ್ಟು ಕಾರಿನ ಬಾಗಿಲಿಗೆ ಒತ್ತಿ ನಿಲ್ಲುತ್ತಾಳೆ. ಗಾಬರಿಯಾದ ಸೂರಿ, ಬಹಳ ಮಮತೆಯಿಂದ ಏನಾಯ್ತಮ್ಮ ಎಂದು ತಲೆ ಸವರಿ ಕೇಳಿದಾಗ ಗಟ್ಟಿಯಾಗಿ ಪಪ್ಪನನ್ನು ಅಪ್ಪಿ, menstrual cycle ಅಂದ್ರೆ ಏನಪ್ಪಾ, ನಂಗೆ ಅದಾಗಿದೆಯಂತೆ. ನನ್ ಸೀನಿಯರ್ಸ್ ಹೇಳಿದ್ರು ಈವತ್ತು ಕೋಚಿಂಗ್ ಹೋದಾಗ ಎನ್ನುತ್ತಾ ಒಂದೇ ಸಮನೆ ಬಿಕ್ಕಿ ಬಿಕ್ಕಿ ಅಳತೊಡಗಿದಳು ಹುಡುಗಿ. ಅಷ್ಟೇ ಸಮಾಧಾನದಿಂದ ಅಪ್ಪ ಮಗಳನ್ನು ಮೆಲ್ಲಗೆ ತನ್ನ ಕಡೆ ತಿರುಗಿಸಿ ಅಷ್ಟೇನಾ.. ಅಷ್ಟಕ್ಕೆ ಇಷ್ಟು ಭಯ ಪಡೋದು ಏನಿದೆ. ಮುಗ್ಧ ಮಗಳು ತಿರುಗು ನಿಂತು, ಇಷ್ಟೊತ್ತೂ ಮುದ್ದೆ ಮಾಡಿ ಹಿಡಿದಿದ್ದ ಬಿಳಿಯ ಲಂಗದ ಮೇಲಿನ ಕೆಂಪು ರಂಗೋಲಿ ಚಿತ್ತಾರವ ತೋರಿಸಿದಾಗ ಅವನ ಸ್ಥಿತಿ ಹೇಳತೀರದು. ಒಂದೇ ಕ್ಷಣದಲ್ಲಿ ಅವ ಅಮ್ಮನಾಗಿ ಬದಲಾಗಬೇಕಿತ್ತು. ಆಗ ಕೂಡಾ ಮಗಳನ್ನು ಹೂವಂತೆ ಎತ್ತಿ ಒಳ ಕೊಂಡೊಯ್ದು ಮಡಿಲ ಮೇಲೇರಿಸಿಕೊಂಡ. ರಿಬ್ಬನ್ ಹಾಕಿ ಕಟ್ಟಿದ್ದ ಜಡೆಯ ಒಂದೊಂದು ಎಳೆ ಬಿಡಿಸುತ್ತಾ ಅವಳ ಮನದ ಭಯದ ಅಲೆ ಕಡಿಮೆ ಮಾಡುತ್ತಿದ್ದ. 

ಇದು ಖುಷಿ ಪಡುವ ಸಂಗತಿ ಮಗಳೇ.. ಇದಕ್ಕೆ ಹೀಗೆ ಅಳೋದಾ..
ಹಾಗಾದ್ರೆ ಹೇಳು, ಏನು ಹಾಗಂದ್ರೆ.
ಹಾ..... ಅದೂ ಅದೂ.. ಪುಟ್ಟ ನಾವು ಹೊರಗಡೆ ಹೋಗೋಣ್ವಾ..
ಮೋನ ಅಂದ್ಳು.. ಪಪ್ಪ ಯಾವತ್ತೂ ವಿಷ್ಯ ಮಾತಾಡಲ್ಲ ಅಂತ. ನಿಜ ಅದು.
ಅಯ್ಯೋ.. ಹಾಗಲ್ಲ ಮಗಳೇ.. ಹೇಳ್ತಿನಿ. ಅವ್ಳೂ ನಿನ್ ತರ ಚಿಕ್ಕವಳಲ್ವಾ, ಅದ್ಕೇ ಗೊತ್ತಿಲ್ಲ. ಯುವರ್ ಪಪ್ಪ ಈಸ್ ಡಿಫರೆಂಟ್ ನಾ ಬೇಬಿ.. ಮೊದ್ಲು ಸ್ನಾನ ಮಾಡಿ, ರೆಡಿ ಆಗು. ಐಸ್ ಕ್ರೀಂ ತಿನ್ನೋಣ ಹೋಗಿ. ಒಕೆ?
ಮತ್ತೇ.. ಇದರ ಬಗ್ಗೆ ಯಾವಾಗ್ ಹೇಳ್ತಿಯಾ.
ಹೇಳ್ತಿನಮ್ಮ.. ನೀ ಹೋಗೀಗ. ಗೆಟ್ ರೆಡಿ ಸೂನ್..


* - ಪದ್ಮಿನಿ ಜೈನ್ ಎಸ್ 
    Padmini Jain S 



ತುಂಬಾ ಮುದ್ದು ಬಂದಿದೆ

ತುಂಬಾ ಮುದ್ದು ಬಂದಿದೆ
ಒಮ್ಮೆ ದೃಷ್ಟಿ ತೆಗೆಯಲೇ
ನನಗೆ ಬುದ್ಧಿ ಎಲ್ಲಿದೆ
ಒಮ್ಮೆ ಕಚ್ಚಿ ನೋಡಲೇ
ಹೇಳದಂತ ಮಾತಿದೆ
ಮುಚ್ಚಿ ಇಡಲೇ....

ಬಯಕೆ ಬಂದು ನಿಂತಿದೆ
ಉಗುರು ಕಚ್ಚಿ ಕೊಳ್ಳಲೇ
ಬೇರೆ ಏನೂ ಕೇಳದೆ
ತುಂಬ ಹಚ್ಚಿ ಕೊಳ್ಳಲೇ
ಹೇಳದಂತ ಮಾತಿದೆ
ಮುಚ್ಚಿ ಇಡಲೇ....


* - ಪದ್ಮಿನಿ ಜೈನ್ ಎಸ್ 
    Padmini Jain S 


ಹಲಸಿನ ಹಣ್ಣಂತ ಬದುಕು

ಹಲಸಿನ ಹಣ್ಣಂತ ಬದುಕು
ನೋಡಲು ಬಲು ಒರಟು
ಒಮ್ಮೆ ನೀ ಮುಟ್ಟು...
ಬರೀ ಮುಳ್ಳು ಗಂಟು...
ಕಿರಿಕಿರಿ ಮೇಣದ ಅಂಟು..

ಆದರೆ 
ಮುಳ್ಳು ಗಂಟು ಅಂಟುಗಳನ್ನು
ನಂಟಾಗಿ ಕಂಡವ ನೀ..
ಅಂಟ ಒರೆಸಿ
ಗಂಟ ಬಿಡಿಸಿ
ಸಿಹಿಯ ತೊಳೆ ತುಂಬಿದೆ..
ಈಗಲೂ ಒಳಗೆ ಅಂಟಿದೆ
ಸಂಬಂಧಗಳ ಬಂಧದಂತಿರುವ ಅಂಟು...


* - ಪದ್ಮಿನಿ ಜೈನ್ ಎಸ್ 
    Padmini Jain S 


ಚಂದಿರ

ಮತ್ತೆ ಬಂದ ನಿನ್ನೆ ರಾತ್ರಿ 
ನನ್ನ ಮುದ್ದು  ಚಂದಿರ..
ಮತ್ತೇ ಬರಲಾರ ಎಂಬಂತಿದ್ದ
ಬೆಳ್ಳಿ ಚಂದಿರ
ಇದೀಗ ಪೂರ್ಣ ಪೌರ್ಣಮಿ
ಶುದ್ಧ ಹಾಲು ಬೆಳಕು ಅವನಿತ್ತ ಖುಷಿ
ಸಾಗರದ ಉಬ್ಬರ
ನನ್ನೆದೆ ಅಲೆಯದು
ಚಿಮ್ಮುವುದು ಬಾನೆತ್ತರ
ಆ ಬಾನ ಸುಂದರನ
ಭಾನುವಿನನುಜನ 
ಹಾರಿ ಚುಂಬಿಸಲು.



* - ಪದ್ಮಿನಿ ಜೈನ್ ಎಸ್ 
    Padmini Jain S 

ತಡವಾಗಿ ಮನೆಗೆ ಬರೋ ಗಂಡ

ಹೊತ್ತೇರಿರುವುದು ಗೊತ್ತಾಗದೆ ಹೊತ್ತಾರಿ ಹೊತ್ತಾಗಿ ರಾತ್ರಿ ಹತ್ತಾಗಿ ಮನೆ ಕಡೆ ಬರುವ ಪತಿರಾಯನ ಕಂಡು ಮಾರಿ ತಿರುಗಿಸಿ ಕೋಪ ಕಾರಿದರೆ ಏನು ಚಂದವೇ 
ನಾರಿ
ನಿಜ ಅಲ್ವಾ .. ಯಾವ ಹೆಣ್ಣೇ ಆಗಲಿ ರಾತ್ರಿ ತಡವಾಗಿ ಮನೆಗೆ ಬರೋ ಗಂಡನನ್ನು ಸಹಿಸಲಾರಳು. ಅಂದು ಅವನಿಗೆ ಎಲ್ಲಾ ರೀತಿಯ ಉಪವಾಸ ಕಾದಿರುತ್ತದೆ. ರಂಪರಾಮಾಯಣಗಳು ನಡೆಯುತ್ತವೆ..
ಆದರೆ ಒಮ್ಮೆ ಆಕೆ ಯೋಚಿಸಬೇಕು. ದಿನವಿಡೀ ಹೊರಗಡೆ ದುಡಿವ ಗಂಡ ದಣಿದು ಮನೆಗೆ ಬಂದಾಗ ಬಯಸುವುದು ಬಾಗಿಲ ಬಳಿ ನಿಂತು ಆಕೆ ಕೊಡುವ ಮುಗುಳ್ನಗೆಯ ಸ್ವಾಗತವನ್ನ. ಆದರೆ ಮನೆ ಒಳಗೆ ಬರುವಾಗಲೇ ರೀತಿಯ ಮುಖ ನೋಡಿದರೆ ಅವನ ಗತಿ ಏನಾದೀತು? ಆಕೆಗೋ ದಿನವಿಡೀ ಮನೆಯಲ್ಲಿ ಕೂತು ಹೇಗೆ ಸಮಯ ಕಳೆಯಲಿ ಎಂಬ ಚಿಂತೆಯಾದರೆ ಅಲ್ಲಿ ಆತ ಅಯ್ಯೋ ಯಾಕಾದರೂ ಸಮಯ ಇಷ್ಟು ವೇಗವಾಗಿ ಓಡುತ್ತಿದೆ ಎಂದು ತಲೆ ಕೆರೆದುಕೊಳ್ಳುತ್ತಾನೆ. ಗಡಿಯಾರ ಇಬ್ಬರಿಗೂ ಒಂದೇ ಆದರೂ ಅದು ಓಡುವ ವೇಗ ಬೇರೆ ಬೇರೆ.
ಅವನಿಗೂ ಆಸೆ ಇರುವುದಿಲ್ಲವೇ ತಾನು ಬೇಗ ಗೂಡು ಸೇರಬೇಕೆಂದು. ಅದಕ್ಕಾಗಿ ಆತ ಬಾಸ್ ಮುಂದೆ ಗೋಗರೆದಿರಬಹುದು, ಶಕ್ತಿ ಮೀರಿ ರಾಶಿ ಫೈಲ್ ಗಳ ನಡುವೆ ಹೋರಾಟ ನಡೆಸಿರಬಹುದು, ಮುಂದೊಮ್ಮೆ ಆಕೆಯೊಂದಿಗೆ ಹೊರಗಡೆ ಹೋಗಬೇಕಾಗಬಹುದೆಂದು ಇಂದು .ಟಿ. ಮಾಡುತ್ತಿರಬಹುದು. ಆದರೆ ಇದ್ಯಾವುದೂ ಆಕೆಯ ಗಮನಕ್ಕೆ ಬಾರದೇ ಹೋಗುವುದು ದುರಾದೃಷ್ಟವೆ. ದಣಿದು ಬಂದ ಆತನಿಗೆ ತುತ್ತೆಂಬ ಮುತ್ತನಿಟ್ಟು, ಮಡಿಲೆಂಬ ಕಡಲ ಕೊಟ್ಟರೆ ಆಕೆಗವನೇ ಮೊದಲ ಮಗ.. ಅವನಿಗೆ ಇನ್ನೊಬ್ಬಳು ಅಮ್ಮ ಸಿಕ್ಕ ತೃಪ್ತ ಭಾವ. ಆತ ತಡವಾಗಿ ಬಂದರೆ ಸಾವಿರ ಪ್ರಶ್ನೆ ಕೇಳಿ ಪ್ರಾಣ ತಿನ್ನದೆ, ಸಮಾಧಾನದ ಒಂದು ಮಾತು ಆಡಿ ನಗು ತಂದರೆ ಅಷ್ಟೇ ಸಾಕು.
ನಿಜವಾಗಿಯೂ ಕೆಲಸದ ಕಾರಣಕ್ಕೆ ತಡವಾಗಿ ಮನೆಗೆ ಬರುವ ಗಂಡಸರಿಗಷ್ಟೇ ಅನ್ವಯ.. ಪೋಲಿ ತಿರುಗುವ ಖಾಲಿ ಕೈಗಳಿಗಲ್ಲ..


* - ಪದ್ಮಿನಿ ಜೈನ್ ಎಸ್ 
    Padmini Jain S